ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಯಾರಿಗೆ ತಾನೆ ಗೊತ್ತಿಲ್ಲ. ಕನ್ನಡ ಚಿತ್ರರಂಗದಲ್ಲಿ ಸೆಂಚುರಿ ಬಾರಿಸಿ ಯಶಸ್ವಿಯಾಗಿ ಮುನ್ನಡೆದಿರುವ ಯಶಸ್ವಿ ನಟ ಶಿವರಾಜ್ಕುಮಾರ್.
ಶಿವರಾಜ್ಕುಮಾರ್ಗೆ ಇದೇ ೧೯ ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿ ಯಶಸ್ವಿ ೨೯ ವರ್ಷ ಪೂರೈಸಿದ ಸಂಭ್ರಮ.
ಈ ಶುಭ ಸಂದರ್ಭದಲ್ಲಿ ಇದೇ ೧೯ ರಂದು ಶ್ರೀ ಮುತ್ತು ಡಾ|| ಶಿವರಾಜ್ಕುಮಾರ್ ಕನ್ನಡ ಯುವ ವೇದಿಕೆ (ರಿ.) ಯು ಗೌರವ ಡಾಕ್ಟರೇಟ್ ಹಾಗೂ ಯಶಸ್ವೀ ದಾಂಪತ್ಯ ಜೀವನ ನಡೆಸಿದ ಶಿವರಾಜ್ಕುಮಾರ್ - ಶ್ರೀಮತಿ ಗೀತಾ ಶಿವರಾಜ್ಕುಮಾರ್ ದಂಪತಿಗಳಿಗೆ ರಾಜಾಜಿನಗರದ ಡಾ|| ರಾಜ್ಕುಮಾರ್ ಕಲಾಕ್ಷೇತ್ರದಲ್ಲಿ ಅದ್ಧೂರಿ ಸನ್ಮಾನ ಸಮಾರಂಭ ಏರ್ಪಡಿಸಿದೆ.
ಚಿತ್ರೋದ್ಯಮದ ಬಹುತೇಕ ಗಣ್ಯರು ಈ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆಂದು ಸಂಘವು ತಿಳಿಸಿದೆ.